ಥಿಯೊಸೊಫಿಕಲ್ ಸೊಸೈಟಿಯು 1875 ರಲ್ಲಿ ರಚನೆಯಾದ ಒಂದು ಸಂಘಟನೆಯಾಗಿದೆ. ಸಮಾಜದಲ್ಲಿ ಯಾವುದೇ ಬೇಧ-ಭಾವ ಇಲ್ಲದ ವಿಶ್ವಭಾತೃತ್ವದ ನಿರ್ಮಾಣ, ವೈಚಾರಿಕತೆಯ ತುಲನಾತ್ಮಕ ಅಧ್ಯಯನ ನಡೆಸುವುದು ಮತ್ತು ಪ್ರಕೃತಿ ನಿಯಮ ಹಾಗೂ ಮಾನವನ ಸುಪ್ತ ಶಕ್ತಿಗಳನ್ನು ಪತ್ತೆ ಹಚ್ಚುವ ಮುಖ್ಯ ಉದ್ದೇಶಗಳಿಂದ ಸ್ಥಾಪಿತವಾಯಿತು. ಈ ಮೂಲ ಸಂಸ್ಥೆ, ವಿಭಜನೆ ಮತ್ತು ಮರುಜೋಡಣೆ ನಂತರ, ಪ್ರಸ್ತುತ ಹಲವಾರು ಉತ್ತರಾಧಿಕಾರಿಗಳನ್ನು ಹೊಂದಿದೆ. == ಇತಿಹಾಸ == ಥಿಯಾಸಾಫಿಕಲ್ ಸೊಸೈಟಿಯನ್ನು ಅಧಿಕೃತವಾಗಿ ಯುನೈಟೆಡ್ ಸ್ಟೇಟ್ಸ್ನ ನ್ಯೂಯಾರ್ಕ್ ನಗರದಲ್ಲಿ 17 ನವೆಂಬರ್ 1875 ರಂದು ಸ್ಥಾಪಿಸಲಾಯಿತು ಇದರ ಮೂಲ ಸ್ಥಾಪಕರೆಂದರೆ ಮ್ಯಾಡಮ್ ಬ್ಲಾವಟಿಸ್ಕಿ ಮತ್ತು ಕರ್ನಲ್ ಎಚ್.ಎಸ್. ಅಲ್ಕಾಟ್, ವಿಲಿಯಂ ಕ್ವಾನ್ ಜಡ್ಜ್. ಓಲ್ಕಾಟ್ ಮೊದಲ ಅಧ್ಯಕ್ಷರಾಗಿದ್ದರು, ಮತ್ತು 1907 ರಲ್ಲಿ ಅವರ ಮರಣದವರೆಗೂ ಅಧ್ಯಕ್ಷರಾದರು. ಕೆಲವು ವರ್ಷಗಳ ನಂತರ ಒಲ್ಕಾಟ್ ಮತ್ತು ಬ್ಲವಾಟ್ಸ್ಕಿ ಭಾರತಕ್ಕೆ ತೆರಳಿದರು ಮತ್ತು ಮದ್ರಾಸ್ನಲ್ಲಿ (ಈಗ ಚೆನ್ನೈ) ಆಡ್ಯಾರ್ ನಲ್ಲಿ ಇಂಟರ್ನ್ಯಾಷನಲ್ ಹೆಡ್ಕ್ವಾರ್ಟರ್ಸ್ ಸ್ಥಾಪಿಸಿದರು.ಅವರು ಪೂರ್ವ ಧರ್ಮಗಳನ್ನು ಅಧ್ಯಯನ ಮಾಡಲು ಆಸಕ್ತಿ ಹೊಂದಿದ್ದರು, ಮತ್ತು ಇವುಗಳು ಸೊಸೈಟಿಯ ಅಜೆಂಡಾದಲ್ಲಿ ಸೇರಿಸಲಾಯಿತು. ಹಲವಾರು ಪುನರಾವರ್ತನೆಗಳ ನಂತರ ಸೊಸೈಟಿಯ ಉದ್ದೇಶಗಳು ವಿಕಸನಗೊಂಡಿವೆ. == ಭಾರತದಲ್ಲಿ ಥಿಯೊಸೊಫಿಕಲ್ ಸೊಸೈಟಿ == ಐರ್ಲೆಂಡ್ ದೇಶದ ಮಹಿಳೆ ಆನಿಬೆಸೆಂಟ್‍ರವರು ಥಿಯಾಸಾಫಿಕಲ್ ಸೊಸೈಟಿಯ ಕಾರ್ಯ ಚಟುವಟಿಕೆಗಳನ್ನು ಭಾರತದಲ್ಲಿ ಆರಂಭಿಸಿ ಅದಕ್ಕೆ ನವ ಚೈತನ್ಯ ನೀಡಿದರು. ಉಪನ್ಯಾಸಗಳ ಮೂಲಕ ಭಾರತೀಯ ಸಂಸ್ಕøತಿಯ ಬಗ್ಗೆ ಅಭಿಮಾನ ಬಿತ್ತಿದರು. ಸಮಾಜದಲ್ಲಿ ಸಮಾನತೆ ಮತ್ತು ಸೋದರತೆಯನ್ನು ವೃದ್ಧಿಸುವುದು ಮತ್ತು ಸಾಮರಸ್ಯ ಸಾಧಿಸಲು ಪ್ರಯತ್ನಿಸಿದರು. ಆನಿಬೆಸೆಂಟರು ಸ್ವಾತಂತ್ರ್ಯ ಚಳುವಳಿಯನ್ನು ವ್ಯಾಪಕವಾಗಿ ಬೆಂಬಲಿಸಿದರು. ‘ನ್ಯೂ ಇಂಡಿಯಾ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. 1916ರಲ್ಲಿ ಹೋಂರೂಲ್ ಚಳುವಳಿಯನ್ನು ಪ್ರಾರಂಭಿಸಿದರು. 1917ರ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷೆಯಾಗಿದ್ದರು. ಭಾರತೀಯ ತಾತ್ವಿಕತೆಗೆ ಮತ್ತು ಸ್ವಾತಂತ್ರ್ಯ ಚಳುವಳಿಗೆ ಇವರು ಅಪಾರ ಕೊಡುಗೆಯನ್ನು ನೀಡಿದರು. == ಗ್ಯಾಲರಿ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==